ಪ್ರತಿಕ್ರಿಯೆಗಳು


Prakash (ಘನಪಾಠಿ ನಾರಾಯಣ ಅವರ ಮೊಮ್ಮಗ): I knew my grandfather only from his 60s up, but have heard that he went through several jobs - much like any middle class person to support his family. He later found his niche as a teacher and set ip an educational initiative called 'Vijaya Gurukula' in Gundlupet. The 'Gurukula' in its prime was much sought after by students in the surrounding areas.

Among his favourite students was Abdul Nazir Sab, who later became the Panchayat Raj Minister in Ramakrishna Hegde Cabinet (and is often credited with pioneering the Panchayat Raj System in Karnataka).

I also remember facilitating some interactions between my grandfather and Bannanje Govindacharya during the late 1970s, when I was a student at Surathkal (NITK). Not much came out of it, as Bannanje remained aloof.

Sudarshan (ಘನಪಾಠಿ ನಾರಾಯಣ ಅವರ ಮೊಮ್ಮಗ): So nicely done. This is absolutely a kind act. I hope this helps in reaching the script to more people. He stood there in the transitional times between the old and new Kannada, and bore an extraordinary talent that had no contemporary value in the small town he lived in.

I recently heard Amish Tripathi bragging that writing is business and he maintains a writing room, where employed people write bits that he directs and compiles into his books. Against that fact, this grandfather kind of people were so humble in the sense they did not care if anyone even read what they wrote. They just expressed their inner voice. They wrote just to spend their urge. These were people bitten by Sulaimani Keeda. The people of Junoon.

Shall stand firm, rooting for my grand old man's intellectual mind of the past. We have displayed a few copies in our bookstore for readers to notice, by the way.

I am sure the Ghanapati lineage on this blog will be helpful to the legacy of the poet. And finally, also looking forward to reviews by whoever understands the script well.

Brinda (ಘನಪಾಠಿ ನಾರಾಯಣ ಅವರ ಮೊಮ್ಮಗಳು, ಸುಧಾಂಶುವಿನ ಪತ್ನಿ): My view about Tata is entirely different. He was a keen follower of cricket. He used to help his daughter in law, by cutting vegetables. I have never seen any person chopping cluster beans (ಗೋರೀಕಾಯಿ) like him.

Sudhamshu (ಘನಪಾಠಿ ನಾರಾಯಣ ಅವರ ಮೊಮ್ಮಗ): I am very happy by appreciation words about Tata, who used to solve my Arithmetic homework. He had a very good command over English. After television came into existence, he used to sit in front of it to watch Doordarshan news. He was very much eager to see his great grand child (particularly my son) which did not happen when he was alive. My son was born after two years of his demise.

Ramanuja: My grandfather Sri Ghanapaati S Narayana was a genius in English and Kannada languages. Personally he was a real professor in English. As one of his students, I used to consult him for clarifications in English. It is very unfortunate that the manuscript of his work, ಬಿದಿ ಪುದಿದ ಗದೆ ಕದನಂ was taken away tactfully and concealed by a "Famous Kannada Poet". But for Appa's efforts, the manuscript would not have been recovered. The poet Dr. S.V. Parameshwara Bhatta was honoured with Pampa Award. What An Irony!!

I am personally happy because my Professor is getting recognition at least posthumously.

G N Ananthan (ಘನಪಾಠಿ ನಾರಾಯಣ ಅವರ ಮಗ): My father was a great scholar of Sanskrit, Kannada and English. He devoted his life towards literature and was a voracious reader. His comments on the literary texts of all the above mentioned languages were unique and thought provoking. He mastered 'Halegannada' but was never brought to the centre from the margin. He was a poet who has not seen the light of the day and remained throughout his life as a 'subaltern who can not speak and does not have a voice to utter'.

Dr Sudarshana (ಘನಪಾಠಿ ನಾರಾಯಣ ಅವರ ಮೊಮ್ಮಗ) wrote an article on him entitled 'ಬೆಳಕು ಕಾಣದ ಕವಿ' in 'Sudha' magazine. GSN for me is the greatest Aasti of Karnataka whose contributions were immense but never applauded. 

Mr Ranganath's attempt will certainly make GSN to speak through others to reach farther. Let GSN reach the centre from the margin through Gamakis, blog and the techno world.

G N ಶ್ರೀರಂಗರಾಜನ್ (ಘನಪಾಠಿ ನಾರಾಯಣ ಅವರ ಮಗ): ನಮ್ಮ ತಂದೆಯವರಾದ ಕೀರ್ತಿಶೇಷ ಶ್ರೀ ಘನಪಾಠಿ ನಾರಾಯಣ ರವರ ಹಳೆಗನ್ನಡದ ಕೃತಿ "ಬಿದಿ ಪುದಿದ ಗದೆ ಕದನಂ" ಪುಸ್ತಕವನ್ನು ಶ್ರೀ B S ರಂಗನಾಥ್ ರವರು ಅಂತರ್ಜಾಲದ ಮೂಲಕ ಪ್ರಕಟಿಸುತ್ತಿರುವ ಸಂಗತಿ ತುಂಬಾ ಸಂತೋಷಕರವಾಗುತ್ತಿದೆ. ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಇದೇ ಸಂದರ್ಭದಲ್ಲಿ ನನ್ನ ತಂದೆಯವರು ನಮ್ಮ ಮನೆ ದೇವರಾದ ದೊಡ್ಡ ಮಳೂರಿನಲ್ಲಿರುವ ಶ್ರೀ ರಾಮಾಪ್ರಮೇಯ ಸ್ವಾಮಿಯ ಮೇಲೆ ಒಂದು ಶ್ಲೋಕವನ್ನು ರಚಿಸಿದ್ದಾರೆ. ಅದನ್ನು ಈ ಮೂಲಕ ಕಳಿಸಿದ್ದೇನೆ:

ನಿತ್ಯಂ ನೀರಜ ಲೋಚನಂ ನಿರುಪಮಂ ನೀತಿಪ್ರಿಯಂ ನಿಸ್ತುಲಂ l
ನಿರ್ಭೇದಾನುಭವಂ ನಿರಂತರ ಗುಣಂ ನೀಲಾಂಗ ರಾಗೋಜ್ವಲಂ l
ನಿಷ್ಪಾಪಂ ನಿಗಮಾರ್ಚಿತಾಂಘ್ರಿಯುಗಲಂ ನಿತ್ಯಾತ್ಮಕಂ ನಿರ್ಮಲಂ l
ನಿಷ್ಪುಣ್ಯಂ ನಿಖಿಲಂ ನಿರಂಜನ ಪದಂ ರಾಮಾಪ್ರಮೇಯಂ ಭಜೇ ll

ಈ ಶ್ಲೋಕದಲ್ಲಿ ಅವರು ನಿ ಎಂಬ ಅಕ್ಷರವನ್ನು 15 ಬಾರಿ ಪ್ರಯೋಗಿಸಿದ್ದಾರೆ. ನಾನೇ ಅದನ್ನು ಹಾಡಿದ್ದೇನೆ. ಧನ್ಯವಾದಗಳು.

Swaminathan (ಘನಪಾಠಿ ನಾರಾಯಣ ಅವರ ಮಗ):
ನನ್ನ ಪೂಜ್ಯ ತಂದೆಯವರಾದಂತಹ ಕೀರ್ತಿಶೇಷ ಶ್ರೀಮಾನ್ ಘನಪಾಠಿ ನಾರಾಯಣ ಐಯ್ಯಂಗಾರ್ ರವರು ರಚಿಸಿರುವ ಹಳೆಗನ್ನಡ ಚಂಪೂಕಾವ್ಯ "ಬಿದಿಪುದಿದ ಗದೆ ಕದನಂ" ಪುಸ್ತಕವನ್ನು ಶ್ರೀ ಬಿ ಎಸ್ ರಂಗನಾಥ್ ರವರು ಅಂತರ್ಜಾಲದ ಮೂಲಕ ಪ್ರಕಟಿಸುತ್ತಿರುವ ವಿಷಯ ತಿಳಿದು ಸಂತೋಷದಿಂದ ಹೃದಯ ತುಂಬಿ ಬಂತು. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು, ಹಾಗೂ ನನ್ನ ಪಿತಾಶ್ರೀ ರವರು ರಚಿಸಿರುವ ನನ್ನ ಮನೆದೇವರ ಶ್ಲೋಕವನ್ನು ಇಂಪಾಗಿ ಹಾಡಿರುವ ನನ್ನ ಅಣ್ಣ ನವರಿಗೂ 
ದೇವರು ಆಯುರಾರೋಗ್ಯ ನೀಡಿ ಇನ್ನಷ್ಟು ಚೈತನ್ಯ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

Ramanuja (ಘನಪಾಠಿ ನಾರಾಯಣ ಅವರ ಮೊಮ್ಮಗ): Grateful acknowledgements to all contributors. Ranganath's efforts in showering light on taataa's work is really praiseworthy. My uncle Swamy's reaction is good, gentle and apt indeed.

 

Comments

  1. ಇದು ಈ ಕೃತಿಯ ವಿಮರ್ಶೆ ಅಲ್ಲ. ಸರಿಯಾದ ವಿಮರ್ಶೆ ಮಾಡಲು ಹಳೆಗನ್ನಡ ಪಾಂಡಿತ್ಯ ಹಾಗೂ ವ್ಯವಧಾನದ ಕೊರತೆ ಇರುವುದರಿಂದ ಈ ಪ್ರತಿಕ್ರಿಯೆಯನ್ನು ಕೆಲವೇ ಅಂಶಗಳ ಬಗ್ಗೆ ಸೀಮಿತಗೊಳಿಸುತ್ತಿದ್ದೇನೆ.

    ನನ್ನ ಮಟ್ಟದಲ್ಲಿ ಕೃತಿಯನ್ನು ನೋಡಿದಾಗ ನನಗೆ ಕಂಡುಬಂದ ಕೆಲವು ಅಂಶಗಳನ್ನು ಹೇಳುವ ಪ್ರಯತ್ನವಿದು. ನಾವೆಲ್ಲ ಕೇಳಿರುವ 'ಕುರುಡರು ಮತ್ತು ಆನೆಯ ಕಥೆಯಂತೆ ಇದು ಕೂಡ ಆಂಶಿಕ ದ್ರಷ್ಟಿಕೋನವಷ್ಟೇ (partial view)

    ಕ್ರತಿಯ ಉದ್ದಕ್ಕೂ ಕಾಣುವ ಒಂದು ಅಂಶವೆಂದರೆ ಕವಿಯ 'ಛಂದೋನಿಷ್ಠೆ' ಹಾಗೂ 'ವ್ಯಾಕರಣನಿಷ್ಠೆ' ಇದು ಕವಿಯ ಕೆಲಸವನ್ನು ಅತ್ಯಂತ ಕ್ಲಿಷ್ಟಕರ ವನ್ನಾಗಿಸುವುದಲ್ಲದೆ ಮೇಲ್ಮಟ್ಟದ ಭಾಷಾ ಪಾಂಡಿತ್ಯದ ಕುರುಹೂ ಹೌದು. ಕವಿಯ ಈ ಪ್ರೌಢಿಮೆಯ ಬಗ್ಗೆ ಎರಡು ಮಾತಿಲ್ಲ.

    ಆದರೂ ಈ 'ಹಳೆಯ ತಲೆಮಾರಿನ' ಭಾಷಾ ಶುದ್ದಿಯ ಬಗೆಗಿನ 'obsession' ಒಂದು ಮಟ್ಟದಲ್ಲಿ ಹೊಸ ಚಿಂತನೆಯ ಅಭಿವ್ಯಕ್ತಿಗೆ ತೊಡಕಾಗಬಹುದೇನೋ ಎಂಬ ಅನುಮಾನ ಕಾಡುತ್ತದೆ.

    ಕ್ರತಿಯ ಉದ್ದಕ್ಕೂ ಕಾಣುವ ಇನ್ನೊಂದು ವಿಶೇಷವೆಂದರೆ ಕವಿಯ 'ಕನ್ನಡ ತನ '. ಸಂಸ್ಕೃತ ಪದಗಳನ್ನು ಬೆರೆಸುವುದನ್ನೇ 'ಅಚ್ಚ ಕನ್ನಡ' ಎಂದು ಅನೇಕರು ಭಾವಿಸಿರುವಾಗ, ಕವಿಯು ಕನ್ನಡ ಪದಗಳನ್ನೇ ಬಳಸುವುದಲ್ಲದೆ, ಹೊಸ ವಿಶೇಷಣಗಳನ್ನು ಆವಿಷ್ಕರಿಸಿರುವುದು 'ಚೇತೋಹಾರಿ'ಯಾಗಿ ಕಾಣಬರುತ್ತದೆ.
    'ನೇಸರ್ವುಟ್ಟು '. 'ಕೆಮ್ಮೂಡಲ್ ' ಮುಂತಾದ ಕನ್ನಡ ಪದಗಳಲ್ಲದೆ 'ಕುಂಭಸಂಭವ'ನು 'ಕೊಡವುಟ್ಟ'ನಾಗಿ 'ಅಗ್ನಿಪರ್ವತ'ವು 'ಉರಿಮೊರಡಿ' ಯಾಗುತ್ತದೆ. ಕಾವ್ಯದುದ್ದಕ್ಕೂ ಈ ರೀತಿಯ 'ತದ್ಭವ' ಸೃಷ್ಟಿ ಯೂ , ಪದಪುಂಜಗಳ ಆವಿಷ್ಕಾರವೂ ಕಾಣಸಿಗುವುದೊಂದು ವಿಶೇಷ. ಆದರೆ ಈ ಭಾಷಾ ಆವಿಷ್ಕಾರದ ಕ್ರಿಯಾಶೀಲ ಅತ್ಯುತ್ಸಾಹ ಇಡೀ ಕಾವ್ಯವನ್ನು 'ಭಾವ, ವಿಚಾರಗಳ ಅಭಿವ್ಯಕ್ತಿ'ಯಿಂದ ದೂರ ಸೆಳೆದು ಒಂದು 'ಪದಪಾಯಸ (alphabet soup) ವನ್ನಾಗಿ ಮಾಡುವ ಅಪಾಯವಿದೆ. 'ಬಿದಿ ಪುದಿ ದ ಗದೆ ಕದನಂ' ಈ ಸ್ಥಿತಿ ತಲುಪಿದೆಯೇ ಎಂಬುದನ್ನು ನಾನು ಇತರ ವಿಮರ್ಶಕರ ತೀರ್ಪಿಗೆ ಬಿಡುತ್ತೇನೆ.

    ಕಾಲ ದೇಶಗಳ ಮಾನದಂಡದಿಂದ ನೋಡಿದರೆ ಈ ಕೃತಿ ಕೊಂಚ ‘out of time and place’ ಎಂದೆನ್ನಿಸಬಹುದು. ಈ ಕೃತಿಯ ಕಾಲ ಪಂಪ ರನ್ನರ ಕಾಲವಲ್ಲ. ಘನಪಾಠಿ ನಾರಾಯಣರಿಗಿಂತ ಸುಮಾರು ೩ ದಶಕಗಳ ಮೊದಲು ಹುಟ್ಟಿದ ನಂದಳಿಕೆಯ ಶಾಲಾ ಮಾಸ್ತರರೊಬ್ಬರು 'ಮುದ್ದಣ'ನಾಗಿ ಹೊಸ ಕನ್ನಡ ಕಾವ್ಯರಾಮದ ಮುಂಬೆಳಗಿನ ಕಹಳೆಯನ್ನು ಊದಿಯಾಗಿತ್ತು. ೧೪ ವರ್ಷ ಮೊದಲೇ ಹುಟ್ಟಿದ್ದ ಮತ್ತೊಬ್ಬ ಕನ್ನಡಾಂಗ್ಲ ಪಂಡಿತ ಟಿ ಪಿ ಕೈಲಾಸಂ ಕನ್ನಡ ಆಡುಭಾಷೆಯ ವಿನೂತನ ಪ್ರಯೋಗಶೀಲತೆಯಿಂದ ಕನ್ನಡ ಪ್ರಹಸನಗಳಿಗೆ ಹೊಸ ಆಯಾಮವನ್ನೇ ನೀಡುತ್ತಿದ್ದ ಕಾಲ. ಹತ್ತು ವರ್ಷ ಚಿಕ್ಕವರಾದ ಇವರದೇ ಊರಿನ ಸಂಬಂಧಿ ಜಿ ಪಿ ರಾಜರತ್ನಂ 'ಎಂಡ್ಕುಡ್ಕನ ' ಪದಗಳಿಂದಲೂ ಸರಳ ಭಾಷೆಯ ಮಕ್ಕಳ ಸಾಹಿತ್ಯದಿಂದಲೂ (ಉದಾ; 'ಬಣ್ಣದ ತಗಡಿನ ತುತ್ತೂರಿ') ಓದುಗರನ್ನು ರಂಜಿಸುತ್ತಿದ್ದ ಕಾಲ. ಕವಿಶೈಲ ಹಾಗೂ ಸಾಧನಕೇರಿಗಳಿಂದಲೂ ಹೊಸ ಸೃಷ್ಟಿ ಹರಿಯುತ್ತಿದ್ದ ಕಾಲ.
    ಈ ಹಿನ್ನೆಯಲ್ಲಿ ಘನಪಾಠಿ ನಾರಾಯಣರ ಪಾಂಡಿತ್ಯಪೂರ್ಣ ಕ್ಲಿಷ್ಟ ಹಳೆಗನ್ನಡ ಓದುಗರನ್ನು ತಲುಪುವುದರಲ್ಲಿ ವಿಫಲವಾಯಿತು ಎನ್ನಬಹುದು.

    ಸಮಕಾಲೀನತೆಯ ಮಾನದಂಡದಿಂದ ಸೋಲುವ ಈ ಕೃತಿಯನ್ನು ಸಾರ್ವಕಾಲಿಕ .ಕೃತಿಗಳ ತಕ್ಕಡಿಯಲ್ಲಿಟ್ಟು ತೂಗಿ ನೋಡಬೇಕಿದೆ. ಇದಕ್ಕೆ ಇನ್ನೂ ಹೆಚ್ಚಿನ ಹಳೆಗನ್ನಡ ಪಾಂಡಿತ್ಯ ಬೇಕಿದೆ.

    ReplyDelete
    Replies
    1. ನಿಮ್ಮ ಚಿಂತನೆ ಸ್ವಾಗತಾರ್ಹ.

      Delete
  2. ಬಿದಿ ಪುದಿದ ಗದೆ ಕದನಂ - ಒಂದು ನೋಟ

    ಹಳೆಗನ್ನಡ ಕಾವ್ಯವಾದ್ದರಿಂದ ಓದಲು ಕೊಂಚ ಸಮಯ ಹಿಡಿಯಿತು. ಈಗಲೂ ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡಿದ್ದೇನೆಂದು ಹೇಳಲಾಗುವುದಿಲ್ಲ.
    ಸರಿಯಾಗಿ ಪೂರ್ತಿ ಓದಿ ಅರ್ಥ ಮಾಡಿಕೊಳ್ಳಲು ಇನ್ನೂ ಎರಡು ಬಾರಿ ನಿಧಾನವಾಗಿ ಓದಬೇಕಿದೆ.
    ಆದರೂ ನನಗೆ ಕಂಡಂತೆ ಒಂದೆರಡು ಮಾತು ಹೇಳಬೇಕೆನ್ನಿಸಿದೆ.
    ಶ್ರೀ ಭೋದಿಸತ್ವರ ವಿಮರ್ಶೆ ಕೂಡ ಓದಿದೆ. ಅವರು ಏಕೋ ಆತುರದಲ್ಲಿ ಒಂದಿಷ್ಟು ವಿಮರ್ಶೆ ಮಾಡಿದಂತಿದೆ.
    ಅವರು ನಿಜವಾಗಿಯೂ ಕಾವ್ಯವನ್ನು ಸಂಪೂರ್ಣವಾಗಿ ಓದಿದರೋ ಇಲ್ಲವೋ ಎಂಬುದೇ ಅನುಮಾನ. ಬರೀ ಮುನ್ನುಡಿ, ಹಿನ್ನುಡಿಗಳಷ್ಟನ್ನೇ ಓದಿ ವಿಮರ್ಶೆ ಬರೆಯುವ ಅನೇಕರಿದ್ದಾರೆ. ಇವರೂ ಹಾಗೆಯೇ ಇರಬಹುದು .
    ಇರಲಿ, ಅವರಿವರ ಬಗ್ಗೆ ಮಾತೇಕೆ? ಮೂಲ ಕೃತಿಯ ಬಗ್ಗೆ ಮಾತಾಡೋಣ.
    ಬಿದಿ ಪುದಿದ ಗದೆ ಕದನಂ ಒಂದು ಉತ್ಕೃಷ್ಟ ಕಾವ್ಯ. ಕಾಲ ದೇಶಗಳ ಎಲ್ಲೆಗಳನ್ನು ದಾಟಿ ನಿಲ್ಲಬಹುದಾದ ಕೃತಿ.
    ಸ್ಪಷ್ಟವಾಗಿ ಕಾಣುವುದೇನೆಂದರೆ ಇದು ಕವಿಯ ಒಳಗಣ ಸೃಷ್ಟಿಶೀಲತೆಯ ಮಹಾನ್ ಅಭಿವ್ಯಕ್ತಿ . ಹಳೆಗನ್ನಡ ಕಾವ್ಯಗಳ ಏರು ಕಾಲದ ನಂತರ ಸಂಸ್ಕೃತದ ದಾಳಿಗೆ ಒಳಗಾದ ಕನ್ನಡ ಭಾಷೆಯ ಪುನರುತ್ಥಾನದ ಕೂಗು.
    ಇದರ ಸಂಪೂರ್ಣ ಶ್ರೇಯ ಘನಪಾಠಿ ನಾರಾಯಣರ ಪಾಂಡಿತ್ಯಕ್ಕೆ ಸಲ್ಲಬೇಕು. ಈ ದೃಷ್ಟಿಕೋನದಿಂದ ಈ ಕೃತಿ ಮುದ್ದಣ ಕೈಲಾಸಂರ ಸಾಹಿತ್ಯಕ್ಕಿಂತ ಪ್ರಮುಖ ಸಾಹಿತ್ಯಿಕ ಮೈಲಿಗಲ್ಲಾಗಬೇಕಿತ್ತು.
    ಆದರೆ ಭಾಷೆಯ ದುರಾದೃಷ್ಟವೋ ಅಥವಾ ಪ್ರತಿಭೆಯನ್ನು ಗುರುತಿಸುವುದರಲ್ಲಿ ಕನ್ನಡಿಗರ ವೈಫಲ್ಯವೋ ಏನೋ ಈ ಕೃತಿ ಬಹುತೇಕ ಅಜ್ಞಾತವಾಗಿಯೇ ಉಳಿದುಬಿಟ್ಟಿದೆ. ಅಂತರ್ಜಾಲದ ಮೂಲಕ ಈ ಕೃತಿಯನ್ನು ಮತ್ತೆ ಬೆಳಕಿಗೆ ತರುವ ರಂಗನಾಥ ಅವರ ಕೆಲಸ ನಿಜಕ್ಕೂ ಅಭಿನಂದನೀಯ.
    ಈ ಕಾವ್ಯಕ್ಕೆ ಬಹುಶಃ ಇನ್ನೂ ಎತ್ತರದ ವೇದಿಕೆಯ ಅಗತ್ಯವಿದೆ. ಈ ಕಾವ್ಯದ ಬಗ್ಗೆ ವಿಶ್ವವಿದ್ಯಾಲಯಗಳಲ್ಲಿ , ಪಂಡಿತ ಗೋಷ್ಠಿಗಳಲ್ಲಿ ಚರ್ಚೆಯ ಅಗತ್ಯವಿದೆ. ಅಂತಹ ವೇದಿಕೆಗಳ ನೇರ ಸಂಪರ್ಕವಿರುವವರು ಯಾರಾದರೂ ಈ ಸಾಲುಗಳನ್ನು ಓದುತ್ತಿರಬಹುದೆಂದು ಆಶಿಸುತ್ತೇನೆ.

    ReplyDelete
  3. ತಮ್ಮ ಅನಿಸಿಕೆಗೆ ಧನ್ಯವಾದ.

    ನೀವೆಂದಂತೆ ಈ ಕಾವ್ಯದ ಬಗ್ಗೆ ವಿಶ್ವವಿದ್ಯಾಲಯಗಳಲ್ಲಿ, ಪಂಡಿತ ಗೋಷ್ಠಿಗಳಲ್ಲಿ ಚರ್ಚೆ ಏರ್ಪಡಬೇಕಾದ್ದು ಅತ್ಯಗತ್ಯ.

    ಮರಣೋತ್ತರವಾಗಿಯಾದರೂ ಈ ಮಹಾಕವಿಗೆ ಸಲ್ಲಬೇಕಾದ ಗೌರವವನ್ನು ಕನ್ನಡಿಗರು ಸಲ್ಲಿಸಲೆಂದು ಆಶಿಸೋಣ.

    ReplyDelete

Post a Comment

Popular posts from this blog

ಲಘು ಕೃತಿಗಳು

ತರಳರ ಕೊರಳಿರಿತದಿರುಳ್, ಸಮಾಪ್ತಿ