ಲಘು ಕೃತಿಗಳು
ಅಮೋಘ ಕಾವ್ಯದ ಅಂತರ್ಜಾಲ ಅವೃತ್ತಿಯನ್ನು ಪೂರ್ಣಗೊಳಿಸುತ್ತಿರುವ ಈ ಸಂದರ್ಭದ ಬಗ್ಗೆ ಹೆಮ್ಮೆಯಿದೆ.
ಹಳೆ - ಹೊಸ ಕನ್ನಡಗಳ ಸೌಹಾರ್ದ ಕುರಿತ ವಿಚಾರವಿನಿಮಯ ಮುಂದುವರಿಯಬೇಕಾದ್ದು ವೇದ್ಯ. ಆ ನಿಟ್ಟಿನಲ್ಲಿ ಈ ಸರಣಿಯ "ಅಭಿಮತ - ನಿರಂತರ" ಎಂಬ ಮುಂದಿನ ಪುಟ ಕಾರ್ಯಾರಂಭ ಮಾಡಲಿದೆ, ಸರ್ವರ ಅಭಿಪ್ರಾಯಗಳನ್ನು ಸ್ನೇಹದಿಂದ ಸ್ವಾಗತಿಸಲಿದೆ.
* * *
ಮುದ್ರಿತ ಪ್ರತಿ ಅಗತ್ಯವಿದ್ದಲ್ಲಿ ಸಂಪರ್ಕಿಸಬೇಕಾದ ವಿಳಾಸ:
ಸಿಲ್ವರ್ ಫಿಶ್ ಬುಕ್ಸ್, 1ಎ, 13ನೇ ಅಡ್ಡ ರಸ್ತೆ, ಕಾಳಿದಾಸ ರಸ್ತೆ, ವಿ. ವಿ. ಮೊಹಲ್ಲಾ, ಮೈಸೂರು 570002.
ದೂರವಾಣಿ (ಮೊಬೈಲ್): 91-810 511 2990
ದೂರವಾಣಿ (ಮೊಬೈಲ್): 91-810 511 2990

































ಇದು ಈ ಕೃತಿಯ ವಿಮರ್ಶೆ ಅಲ್ಲ. ಸರಿಯಾದ ವಿಮರ್ಶೆ ಮಾಡಲು ಹಳೆಗನ್ನಡ ಪಾಂಡಿತ್ಯ ಹಾಗೂ ವ್ಯವಧಾನದ ಕೊರತೆ ಇರುವುದರಿಂದ ಈ ಪ್ರತಿಕ್ರಿಯೆಯನ್ನು ಕೆಲವೇ ಅಂಶಗಳ ಬಗ್ಗೆ ಸೀಮಿತಗೊಳಿಸುತ್ತಿದ್ದೇನೆ.
ReplyDeleteನನ್ನ ಮಟ್ಟದಲ್ಲಿ ಕೃತಿಯನ್ನು ನೋಡಿದಾಗ ನನಗೆ ಕಂಡುಬಂದ ಕೆಲವು ಅಂಶಗಳನ್ನು ಹೇಳುವ ಪ್ರಯತ್ನವಿದು. ನಾವೆಲ್ಲ ಕೇಳಿರುವ 'ಕುರುಡರು ಮತ್ತು ಆನೆಯ ಕಥೆಯಂತೆ ಇದು ಕೂಡ ಆಂಶಿಕ ದ್ರಷ್ಟಿಕೋನವಷ್ಟೇ (partial view)
ಕ್ರತಿಯ ಉದ್ದಕ್ಕೂ ಕಾಣುವ ಒಂದು ಅಂಶವೆಂದರೆ ಕವಿಯ 'ಛಂದೋನಿಷ್ಠೆ' ಹಾಗೂ 'ವ್ಯಾಕರಣನಿಷ್ಠೆ' ಇದು ಕವಿಯ ಕೆಲಸವನ್ನು ಅತ್ಯಂತ ಕ್ಲಿಷ್ಟಕರ ವನ್ನಾಗಿಸುವುದಲ್ಲದೆ ಮೇಲ್ಮಟ್ಟದ ಭಾಷಾ ಪಾಂಡಿತ್ಯದ ಕುರುಹೂ ಹೌದು. ಕವಿಯ ಈ ಪ್ರೌಢಿಮೆಯ ಬಗ್ಗೆ ಎರಡು ಮಾತಿಲ್ಲ.
ಆದರೂ ಈ 'ಹಳೆಯ ತಲೆಮಾರಿನ' ಭಾಷಾ ಶುದ್ದಿಯ ಬಗೆಗಿನ 'obsession' ಒಂದು ಮಟ್ಟದಲ್ಲಿ ಹೊಸ ಚಿಂತನೆಯ ಅಭಿವ್ಯಕ್ತಿಗೆ ತೊಡಕಾಗಬಹುದೇನೋ ಎಂಬ ಅನುಮಾನ ಕಾಡುತ್ತದೆ.
ಕ್ರತಿಯ ಉದ್ದಕ್ಕೂ ಕಾಣುವ ಇನ್ನೊಂದು ವಿಶೇಷವೆಂದರೆ ಕವಿಯ 'ಕನ್ನಡ ತನ '. ಸಂಸ್ಕೃತ ಪದಗಳನ್ನು ಬೆರೆಸುವುದನ್ನೇ 'ಅಚ್ಚ ಕನ್ನಡ' ಎಂದು ಅನೇಕರು ಭಾವಿಸಿರುವಾಗ, ಕವಿಯು ಕನ್ನಡ ಪದಗಳನ್ನೇ ಬಳಸುವುದಲ್ಲದೆ, ಹೊಸ ವಿಶೇಷಣಗಳನ್ನು ಆವಿಷ್ಕರಿಸಿರುವುದು 'ಚೇತೋಹಾರಿ'ಯಾಗಿ ಕಾಣಬರುತ್ತದೆ.
'ನೇಸರ್ವುಟ್ಟು '. 'ಕೆಮ್ಮೂಡಲ್ ' ಮುಂತಾದ ಕನ್ನಡ ಪದಗಳಲ್ಲದೆ 'ಕುಂಭಸಂಭವ'ನು 'ಕೊಡವುಟ್ಟ'ನಾಗಿ 'ಅಗ್ನಿಪರ್ವತ'ವು 'ಉರಿಮೊರಡಿ' ಯಾಗುತ್ತದೆ. ಕಾವ್ಯದುದ್ದಕ್ಕೂ ಈ ರೀತಿಯ 'ತದ್ಭವ' ಸೃಷ್ಟಿ ಯೂ , ಪದಪುಂಜಗಳ ಆವಿಷ್ಕಾರವೂ ಕಾಣಸಿಗುವುದೊಂದು ವಿಶೇಷ.
ಆದರೆ ಈ ಭಾಷಾ ಆವಿಷ್ಕಾರದ ಕ್ರಿಯಾಶೀಲ ಅತ್ಯುತ್ಸಾಹ ಇಡೀ ಕಾವ್ಯವನ್ನು 'ಭಾವ, ವಿಚಾರಗಳ ಅಭಿವ್ಯಕ್ತಿ'ಯಿಂದ ದೂರ ಸೆಳೆದು ಒಂದು 'ಪದಪಾಯಸ (alphabet soup) ವನ್ನಾಗಿ ಮಾಡುವ ಅಪಾಯವಿದೆ. 'ಬಿದಿ ಪುದಿ ದ ಗದೆ ಕದನಂ' ಈ ಸ್ಥಿತಿ ತಲುಪಿದೆಯೇ ಎಂಬುದನ್ನು ನಾನು ಇತರ ವಿಮರ್ಶಕರ ತೀರ್ಪಿಗೆ ಬಿಡುತ್ತೇನೆ.
ಕಾಲ ದೇಶಗಳ ಮಾನದಂಡದಿಂದ ನೋಡಿದರೆ ಈ ಕೃತಿ ಕೊಂಚ ‘out of time and place’ ಎಂದೆನ್ನಿಸಬಹುದು. ಈ ಕೃತಿಯ ಕಾಲ ಪಂಪ ರನ್ನರ ಕಾಲವಲ್ಲ. ಘನಪಾಠಿ ನಾರಾಯಣರಿಗಿಂತ ಸುಮಾರು ೩ ದಶಕಗಳ ಮೊದಲು ಹುಟ್ಟಿದ ನಂದಳಿಕೆಯ ಶಾಲಾ ಮಾಸ್ತರರೊಬ್ಬರು 'ಮುದ್ದಣ'ನಾಗಿ ಹೊಸ ಕನ್ನಡ ಕಾವ್ಯರಾಮದ ಮುಂಬೆಳಗಿನ ಕಹಳೆಯನ್ನು ಊದಿಯಾಗಿತ್ತು. ೧೪ ವರ್ಷ ಮೊದಲೇ ಹುಟ್ಟಿದ್ದ ಮತ್ತೊಬ್ಬ ಕನ್ನಡಾಂಗ್ಲ ಪಂಡಿತ ಟಿ ಪಿ ಕೈಲಾಸಂ ಕನ್ನಡ ಆಡುಭಾಷೆಯ ವಿನೂತನ ಪ್ರಯೋಗಶೀಲತೆಯಿಂದ ಕನ್ನಡ ಪ್ರಹಸನಗಳಿಗೆ ಹೊಸ ಆಯಾಮವನ್ನೇ ನೀಡುತ್ತಿದ್ದ ಕಾಲ. ಹತ್ತು ವರ್ಷ ಚಿಕ್ಕವರಾದ ಇವರದೇ ಊರಿನ ಸಂಬಂಧಿ ಜಿ ಪಿ ರಾಜರತ್ನಂ 'ಎಂಡ್ಕುಡ್ಕನ ' ಪದಗಳಿಂದಲೂ ಸರಳ ಭಾಷೆಯ ಮಕ್ಕಳ ಸಾಹಿತ್ಯದಿಂದಲೂ (ಉದಾ; 'ಬಣ್ಣದ ತಗಡಿನ ತುತ್ತೂರಿ') ಓದುಗರನ್ನು ರಂಜಿಸುತ್ತಿದ್ದ ಕಾಲ. ಕವಿಶೈಲ ಹಾಗೂ ಸಾಧನಕೇರಿಗಳಿಂದಲೂ ಹೊಸ ಸೃಷ್ಟಿ ಹರಿಯುತ್ತಿದ್ದ ಕಾಲ.
ಈ ಹಿನ್ನೆಯಲ್ಲಿ ಘನಪಾಠಿ ನಾರಾಯಣರ ಪಾಂಡಿತ್ಯಪೂರ್ಣ ಕ್ಲಿಷ್ಟ ಹಳೆಗನ್ನಡ ಓದುಗರನ್ನು ತಲುಪುವುದರಲ್ಲಿ ವಿಫಲವಾಯಿತು ಎನ್ನಬಹುದು.
ಸಮಕಾಲೀನತೆಯ ಮಾನದಂಡದಿಂದ ಸೋಲುವ ಈ ಕೃತಿಯನ್ನು ಸಾರ್ವಕಾಲಿಕ .ಕೃತಿಗಳ ತಕ್ಕಡಿಯಲ್ಲಿಟ್ಟು ತೂಗಿ ನೋಡಬೇಕಿದೆ. ಇದಕ್ಕೆ ಇನ್ನೂ ಹೆಚ್ಚಿನ ಹಳೆಗನ್ನಡ ಪಾಂಡಿತ್ಯ ಬೇಕಿದೆ.